ನಾಯನ್ಮಾರಮೂಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೂಟರಿಗೆ ಕಾರು ಡಿಕ್ಕಿ; ಗಂಭೀರ ಗಾಯಗೊಂಡಿದ್ದ ಬೆಳ್ಳೂರು ನಿವಾಸಿ ಮೃತ್ಯು


 ಕಾಸರಗೋಡು:  ನಾಯನ್ಮಾರಮೂಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೆಳ್ಳೂರು ನಿವಾಸಿ ಮೃತಪಟ್ಟ ಘಟನೆ ನಡೆದಿದೆ.  ಬೆಳ್ಳೂರು ಕಲ್ಪಣೆ ನಿವಾಸಿ ವಯರಿಂಗ್ ಕಾರ್ಮಿಕ  ವಿಶ್ವನಾಥ(49) ಮೃತಪಟ್ಟ ಯುವಕ. ಇಂದು (ಸೋಮವಾರ) ಅವರು ಚೆಂಗಳ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ವಾರದ ಹಿಂದೆ ನಾಯನ್ಮಾರಮೂಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಉಂಟಾಗಿತ್ತು.‌ ವಿಶ್ವನಾಥ ಅವರು ಚಲಾಯಿಸಿದ ಸ್ಕೂಟರಿಗೆ ಪಾಲಕ್ಕಾಡ್ ನಿವಾಸಿಗಳು ಪ್ರಯಾಣಿಸಿದ ಕಾರು ಡಿಕ್ಕಿ ಹೊಡೆದಿತ್ತು. ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದರು. ಮೃತರು ಪತ್ನಿ‌ ಕವಿತ, ಮಕ್ಕಳಾದ ಅಶ್ವಿತ್, ಅನ್ವಿತಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು